M.G.V.V. Highschool, Dodmane.

New Building built during 2019-20

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತುತ್ತ ತುದಿಯಲ್ಲಿರುವ ಆರ್ಥಿಕವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರ ಹಿಂದುಳಿದ ಈ ಪ್ರದೇಶದ ಜನರಿಗೆ ದುರ್ಲಭವಾದ ಶಿಕ್ಷಣವನ್ನು ಅವರು ಇರುವ ಸ್ಥಳದಲ್ಲೇ ನೀಡುವುದು ಪ್ರಥಮ ಆದ್ಯತೆಯಾಗಿತ್ತು. ಕುಮಟಾ, ಶಿರಸಿಯಂಥಾ ದೂರದ ಊರಿಗೆ ಹೋಗಿ ಪ್ರೌಢ ಶಿಕ್ಷಣವನ್ನು ಪಡೆಯಲಾಗದೇ ಅನೇಕರು ಶಿಕ್ಷಣ ವಂಚಿತರಾಗುತ್ತಿರುವ ಸಮಯದಲ್ಲಿ ಚಿಂತಕರು ದೂರ ದೃಷ್ಠಿ ಉಳ್ಳವರು ಸಹಕಾರದ ಹರಿಕಾರರು ಶಿಕ್ಷಣ ಪ್ರೇಮಿಗಳು ಆಗಿರುವ ಶ್ರೀ ಗಣೇಶ ಹೆಗಡೆ ದೊಡ್ಮನೆಯಲ್ಲಿ 1968 ರಲ್ಲಿ ಪ್ರೌಢಶಾಲೆಯನ್ನು ಆರಂಭಿಸಿದರು.

ಈ ಶಾಲೆಯ ಆರಂಭಿಸಲು ಶ್ರಿ ಗಣಪತಿ ಎಸ್ ಭಟ್ಟ, ಶ್ರೀ ನಾರಾಯಣ ತಿಮ್ಮಣ್ಣ ಭಟ್ಟ, ಗಡಿಹಿತ್ಲು, ಶ್ರಿ ಎಂ.ಎಂ ಹೆಗಡೆ, ಬಾಳೇಸರ, ಶ್ರೀ ಗಣೇಶ ಭಟ್ಗ ಕಲ್ಲಕೈ, ಶ್ರೀ ಶ್ರೀನಿವಾಸ ಶಾನಭಾಗ ವಂದಾನೆ, ಶ್ರೀ ನಾರಾಯಣ ರಾಮನಾಥ ಹೆಗಡೆ, ದೊಡ್ಮನೆ, ಅನೇಕ ವಿದ್ಯಾವಂತರು ಶಿಕ್ಷಣ ಅಭಿಮಾನಿಗಳು ಶ್ರೀ ಗಣೇಶ ಹೆಗಡೆಯವರಿಗೆ ಸಹಕರಿಸಿದರು. ಇಂದು ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ವಿನಾಯಕ ರಾವ್ ಜಿ. ಹೆಗಡೆ ದೊಡ್ಮನೆ ಯವರು ಸುಸಜ್ಜಿತವಾದ ನೂತನ ಕಟ್ಟಡವನ್ನು ಸ್ಥಳೀಯರ ವಿದ್ಯಾ ಪೋಷಕ ಧಾನಿಗಳಿಂದ ಮತ್ತು ಹಳೆಯ ವಿದ್ಯಾರ್ಥಿ ಸಹಕಾರದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಅಕರ್ಷಕವಾದ ಸುಸಜ್ಜಿತವಾದ ನೂತನ ಕಟ್ಟಡವನ್ನು ನಿರ್ಮಿಸಿಕೊಟ್ಟರು. ಇಲ್ಲಿಯವರೆಗೆ ಈ ಶಾಲೆಯಲ್ಲಿ ಸುಮಾರು 1700 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪೂರೈಸಿದ್ದಾರೆ.

ಸಾಧನೆಗಳು:2007,2009,2013, 2014, 2016, 2018, 2021 ಸಾಲಿನಲ್ಲಿ ನಮ್ಮ ಪ್ರೌಢಶಾಲೆ ಶೇಕಡಾ 100 ರಷ್ಟು ಪಲಿತಾಂಶ ದಾಖಲಿಸಿದೆ.

ವಿದ್ಯಾರ್ಥಿಗಳ ಸಾಧನೆ.

  • ಕುಮಾರ ರಾಜೀವ ಭಟ್ಟ 2014, ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ.
  • ಕುಮಾರ ಕಾರ್ತಿಕ ಜಿ. ಭಟ್ಟ 2019, ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ 8ನೇ ಸ್ಥಾನ.

ಸಹಪಠ್ಯ ಚಟುವಟಿಕೆಯಲ್ಲಿ ಸಾಧನೆ

  • ಶ್ರೀ ಟಿ.ಎನ್ ಭಟ್ಟ ಇವರು ಶಿಕ್ಷಕರಿಗಾಗಿ ನಡೆದ ರಾಜ್ಯ ಮಟ್ಟದ ಆಶು ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸಂಸ್ಥೆ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
  • ಕುಮಾರಿ ಜಯಲಕ್ಷ್ಮೀ ಎಂ ಹೆಗಡೆ, 2005 ರಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ.
  • ಕುಮಾರಿ ಸಂದೀಪಾ ಶಾನಭಾಗ 2006 ರಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿಂದಿ ಭಾಷಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ.
  • ಕುಮಾರಿ ಸುಶೀಲಾ ಸಿ. ಹೆಗಡೆ, 2009 ರಲ್ಲಿ ರಾಜ್ಯ ಮಟ್ಟದ ಚರ್ಚಾಸ್ಪರ್ಧೆ ದ್ವಿತೀಯ ಸ್ಥಾನ.
  • ಕುಮಾರ ನಾಗರಾಜ ಗೌಡ, ಕಿರಿಯರ ವಿಭಾಗದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ.

Vice Chairman Participated in the rituals held during opening ceremony of new school building

ಸಿಬ್ಬಂದಿಗಳು

Fakirappa Haranagiri
(Head Master)
Timmanna N Bhat
(Art Teacher)
Seetaram G Bhat
(Maths Teacher)
Balachandra G Hegde
(English Teacher)
Raghavendra G Kumatakar
(Hindi Teacher)
Honnavva N Harijan
(Science Teacher)
Lakshmi Badigera
(Karanikaru)
Umesh S Korachar
P.E.Teacher